Adjectives / ಗುಣವಾಚಕಗಳು

ಗುಣವಾಚಕಗಳು ನಾಮಪದ ಹಾಗೂ ಸರ್ವನಾಮದ ನಿರ್ದಿಷ್ಟ ಮಾಹಿತಿಯನ್ನು ವಿವರಿಸುವ ಪದಗಳಾಗಿವೆ. 
ಗುಣವಾಚಕಗಳು ಹೆಚ್ಚಿನ ಮಾಹಿತಿಯನ್ನು ನೀಡಿ ನಾಮಪದವನ್ನು ಬದಲಾಯಿಸುತ್ತವೆ.
 
ನಾವು ವಿವರಣೆ ಬಗ್ಗೆ ಮಾತನಾಡುವುದಾದರೆ , ಇದು ವಯಸ್ಸು (ಕಿರಿಯ , ಹಿರಿಯ ಮುಂತಾದವು) , ಗಾತ್ರ (ದೊಡ್ಡ , ಸಣ್ಣ ,ಸೂಕ್ಷ್ಮ , ಮುಂತಾದವು) , ಆಕಾರ (ವೃತ್ತ , ಮೊಟ್ಟೆಯಾಕಾರ , ಚೌಕ , ಮುಂತಾದವು) , ಬಣ್ಣ (ಬೂದು , ಕಪ್ಪು , ಗುಲಾಬಿ , ಮುಂತಾದವು ) , ಬೇರೆ ಲಕ್ಷಣಗಳು (ಒಳ್ಳೆಯ , ಸುಂದರ , ಕೆಟ್ಟ , ಮುಂತಾದವು) , ಮುಂತಾದವುಗಳಿಗೆ  ಸಂಬಂಧಿಸಿದೆ.
ಉದಾಹರಣೆ :- Pretty girl . ಇಲ್ಲಿ Girl”  ನಾಮಪದ . ಆದರೆ ಇದನ್ನು ವಿವರಿಸಲು Pretty” ಉಪಯೋಗಿಸಲಾಗಿದೆ. ಆದ್ದರಿಂದ Pretty” ಎನ್ನುವುದು ಗುಣವಾಚಕ.

ಉದಾಹರಣೆಗಳು :

ವಾಕ್ಯ
ಗುಣವಾಚಕ
ವಿವರಣೆ
Sumit is an intelligent boy.
intelligent
ಇಲ್ಲಿ ,  boy” ನಾಮಪದದ ವಿವರಣೆ ಬುದ್ಧಿವಂತ . ಹಾಗಾಗಿ intelligent” ಗುಣವಾಚಕ.
I have an elder brother.
elder
elder ಸಹೋದರನ ವಯಸ್ಸನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ elder” ಗುಣವಾಚಕ.
Roses in my garden are red.
red
red” ಗುಲಾಬಿಯ ಬಣ್ಣವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ red” ಗುಣವಾಚಕ.
Kusum wore a beautiful dress.
beautiful
beautiful” ಬಟ್ಟೆಯನ್ನು ವಿವರಿಸುತ್ತದೆ. ಹಾಗಾಗಿ beautiful” ಗುಣವಾಚಕ.
Everyone should follow healthy diet.
healthy
healthy” ಆಹಾರ ಕ್ರಮವನ್ನು ವಿವರಿಸುತ್ತದೆ. ಹಾಗಾಗಿ healthy” ಗುಣವಾಚಕ.

ಗುಣವಾಚಕಗಳ ವರ್ಗಗಳು: 

Descriptive Adjectives (ವಿವರಣಾತ್ಮಕ ಗುಣವಾಚಕಗಳು)
ಇವುಗಳು ಸಾಮಾನ್ಯ ಗುಣವಾಚಕಗಳು. ವಿವರಣಾತ್ಮಕ ಗುಣವಾಚಕಗಳು  ನಾಮಪದದ ಹಾಗೂ ಸರ್ವನಾಮದ  ಲಕ್ಷಣಗಳು.
beautiful painting, pretty girl, silly question, bad performance,  naughty kid
Demonstrative Adjectives (ಪ್ರದರ್ಶನಾತ್ಮಕ ಗುಣವಾಚಕಗಳು)
ಪ್ರದರ್ಶನಾತ್ಮಕ ಗುಣವಾಚಕಗಳು ನಿರ್ದಿಷ್ಟ ನಾಮಪದವನ್ನು ಸೂಚಿಸುತ್ತವೆ.
This : ಹತ್ತಿರದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
That : ದೂರದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
These : ಹತ್ತಿರದ ಏಕವಚನದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
Those: ದೂರದ ಬಹುವಚನದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
this boy, that chair, those kids, these toys
Possessive Adjectives (ಸ್ವಾಮ್ಯಸೂಚಕ ಗುಣವಾಚಕಗಳು)
ಸ್ವಾಮ್ಯಸೂಚಕ ಗುಣವಾಚಕಗಳು 
ಮಾಲೀಕತ್ವದ ನಾಮಪದವನ್ನು ವಿವರಿಸುತ್ತವೆ. ಈ ಪದಗಳು ಸೇರಿದ ಸಂಬಂಧವನ್ನು ವಿವರಿಸುತ್ತವೆ.
This is my dog. 
OR 
This dog is mine.
Quantitative Adjectives (ಪರಿಮಾಣಾತ್ಮಕ ಗುಣವಾಚಕಗಳು)
ಇವುಗಳನ್ನು ಸಂಖ್ಯಾ ಗುಣವಾಚಕಗಳು ಎಂದು ಕರೆಯುತ್ತೇವೆ . 
ten books, two dresses, hundred runs
Indefinite Adjectives (ಅನಿರ್ದಿಷ್ಟ ಗುಣವಾಚಕಗಳು)
ಅನಿರ್ದಿಷ್ಟ ಗುಣವಾಚಕಗಳು ನಿರ್ದಿಷ್ಟವಲ್ಲದ ನಾಮಪದವನ್ನು ಸೂಚಿಸುತ್ತವೆ.
many schools, few people, any pen, some fruits
Interrogative Adjectives (ವಿಚಾರಣೆಯ ಗುಣವಾಚಕಗಳು)
ವಿಚಾರಣೆಯ ಗುಣವಾಚಕಗಳುನ್ನು ಪ್ರಶ್ನೆ ಕೇಳಲು ಉಪಯೋಗಿಸಲಾಗುತ್ತದೆ.
which dress?,  whose pen?, what time?
Distributive Adjectives
(ವಿತರಣಾ ಗುಣವಾಚಕಗಳು)
ಒಂದು ಅಥವಾ ಒಂದಕ್ಕಿಂತ ಹೆಚ್ಚಿನದ್ದರ ಬಗ್ಗೆ ಹೇಳುವುದಿದ್ದರೆ  ಈ ಗುಣವಾಚಕಗಳನ್ನು ಉಪಯೋಗಿಸಲಾಗುತ್ತದೆ.
each, either, none, any, neither
Neither of the two was selected.
Each girl sang National Anthem.