ಮಲ್ಟಿಭಾಷಿ ತಂಡದಿಂದ ಸ್ವಾತಂತ್ರ್ಯ ದಿನದ ಶುಭಾಷಯಗಳು.
ಈ ಸ್ವಾತಂತ್ರ್ಯ ದಿನದಂದು, ಮಲ್ಟಿಭಾಷಿಯಲ್ಲಿ ನಾವು, ಭಾಷಾ ಕಲಿಕೆಯಲ್ಲಿ ಒಂದು ಹೊಸ ಅಲೆಯನ್ನು ಆರಂಭಿಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ ನಾವು, ಕನ್ನಡ ಭಾಷೆಯನ್ನು ಕಲಿಯುವವರು ಮತ್ತು ನಿಮ್ಮಂತಹ ಸ್ಥಳೀಯ ಕನ್ನಡ ಭಾಷಿಗರನ್ನು ಸಂಪರ್ಕಿಸುತ್ತೇವೆ.
“help and learn” ಎಂಬ ಈ ಕಾರ್ಯಕ್ರಮದಲ್ಲಿ ನೀವು ಕನ್ನಡ ಭಾಷೆಯನ್ನು ಕಲಿಯುವವರಿಗೆ ಗುರು ಆಗಬಹುದು ಮತ್ತು ಮರಳಿ ಒಬ್ಬ ಇಂಗ್ಲಿಷ್ ದೋಸ್ತ್ ಅನ್ನು ಪಡೆಯಬಹುದು.
ಈ ಕಾರ್ಯಕ್ರಮಕ್ಕಾಗಿ ಕೆಲವು ಮುಖ್ಯ ಅಂಶಗಳು:
1-ಸರಳ ಇಂಗ್ಲೀಷ್ ಅರ್ಥಮಾಡಿಕೊಳ್ಳಬಹುದಾದ ಮತ್ತು ಮಾತನಾಡಬಲ್ಲವರಿಗೆ ಮಾತ್ರ ಈ ಕಾರ್ಯಕ್ರಮವು ತೆರೆದಿರುತ್ತದೆ.
2- ನಿಮ್ಮ ಮತ್ತು ನಿಮ್ಮ ಇಂಗ್ಲೀಷ್ ದೋಸ್ತ್ ನ ವೈಯಕ್ತಿಕ ವಿವರಗಳಿಗೆ ತೀವ್ರವಾದ ಗೌಪ್ಯತೆಯನ್ನು ನೀಡಲಾಗುತ್ತದೆ
3- ನೀವು ಮತ್ತು ನಿಮ್ಮ ಸ್ನೇಹಿತ ಈ ಸಂವಹನದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಲು ಮಲ್ಟಿಭಾಷಿಯ ಭಾಷಾ ತಜ್ಞರು ಆರಂಭದಲ್ಲಿ ಮತ್ತು ಅಗತ್ಯವಾದಾಗ ಸಹಾಯ ಮಾಡುತ್ತಾರೆ
ಈ ಕಾರ್ಯಕ್ರಮದ ಭಾಗವಾಗಲು ನೀವು ಉತ್ಸುಕರಾಗಿದ್ದೀರಾ?