Adjectives / ಗುಣವಾಚಕಗಳು
ಗುಣವಾಚಕಗಳು ನಾಮಪದ ಹಾಗೂ ಸರ್ವನಾಮದ ನಿರ್ದಿಷ್ಟ ಮಾಹಿತಿಯನ್ನು ವಿವರಿಸುವ ಪದಗಳಾಗಿವೆ.
ಗುಣವಾಚಕಗಳು ಹೆಚ್ಚಿನ ಮಾಹಿತಿಯನ್ನು ನೀಡಿ ನಾಮಪದವನ್ನು ಬದಲಾಯಿಸುತ್ತವೆ.
ನಾವು ವಿವರಣೆ ಬಗ್ಗೆ ಮಾತನಾಡುವುದಾದರೆ , ಇದು ವಯಸ್ಸು (ಕಿರಿಯ , ಹಿರಿಯ ಮುಂತಾದವು) , ಗಾತ್ರ (ದೊಡ್ಡ , ಸಣ್ಣ ,ಸೂಕ್ಷ್ಮ , ಮುಂತಾದವು) , ಆಕಾರ (ವೃತ್ತ , ಮೊಟ್ಟೆಯಾಕಾರ , ಚೌಕ , ಮುಂತಾದವು) , ಬಣ್ಣ (ಬೂದು , ಕಪ್ಪು , ಗುಲಾಬಿ , ಮುಂತಾದವು ) , ಬೇರೆ ಲಕ್ಷಣಗಳು (ಒಳ್ಳೆಯ , ಸುಂದರ , ಕೆಟ್ಟ , ಮುಂತಾದವು) , ಮುಂತಾದವುಗಳಿಗೆ ಸಂಬಂಧಿಸಿದೆ.
ಉದಾಹರಣೆ :- Pretty girl . ಇಲ್ಲಿ “Girl” ನಾಮಪದ . ಆದರೆ ಇದನ್ನು ವಿವರಿಸಲು “Pretty” ಉಪಯೋಗಿಸಲಾಗಿದೆ. ಆದ್ದರಿಂದ “Pretty” ಎನ್ನುವುದು ಗುಣವಾಚಕ.
ಉದಾಹರಣೆಗಳು :
ವಾಕ್ಯ
|
ಗುಣವಾಚಕ
|
ವಿವರಣೆ
|
Sumit is an intelligent boy.
|
intelligent
|
ಇಲ್ಲಿ , “boy” ನಾಮಪದದ ವಿವರಣೆ ಬುದ್ಧಿವಂತ . ಹಾಗಾಗಿ “ intelligent” ಗುಣವಾಚಕ.
|
I have an elder brother.
|
elder
|
” elder “ ಸಹೋದರನ ವಯಸ್ಸನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ “elder” ಗುಣವಾಚಕ.
|
Roses in my garden are red.
|
red
|
” red” ಗುಲಾಬಿಯ ಬಣ್ಣವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ “red” ಗುಣವಾಚಕ.
|
Kusum wore a beautiful dress.
|
beautiful
|
” beautiful” ಬಟ್ಟೆಯನ್ನು ವಿವರಿಸುತ್ತದೆ. ಹಾಗಾಗಿ “beautiful” ಗುಣವಾಚಕ.
|
Everyone should follow healthy diet.
|
healthy
|
“healthy” ಆಹಾರ ಕ್ರಮವನ್ನು ವಿವರಿಸುತ್ತದೆ. ಹಾಗಾಗಿ “healthy” ಗುಣವಾಚಕ.
|
ಗುಣವಾಚಕಗಳ ವರ್ಗಗಳು:
Descriptive Adjectives (ವಿವರಣಾತ್ಮಕ ಗುಣವಾಚಕಗಳು)
|
ಇವುಗಳು ಸಾಮಾನ್ಯ ಗುಣವಾಚಕಗಳು. ವಿವರಣಾತ್ಮಕ ಗುಣವಾಚಕಗಳು ನಾಮಪದದ ಹಾಗೂ ಸರ್ವನಾಮದ ಲಕ್ಷಣಗಳು.
|
beautiful painting, pretty girl, silly question, bad performance, naughty kid
|
Demonstrative Adjectives (ಪ್ರದರ್ಶನಾತ್ಮಕ ಗುಣವಾಚಕಗಳು)
|
ಪ್ರದರ್ಶನಾತ್ಮಕ ಗುಣವಾಚಕಗಳು ನಿರ್ದಿಷ್ಟ ನಾಮಪದವನ್ನು ಸೂಚಿಸುತ್ತವೆ.
This : ಹತ್ತಿರದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
That : ದೂರದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
These : ಹತ್ತಿರದ ಏಕವಚನದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
Those: ದೂರದ ಬಹುವಚನದ ನಾಮಪದವನ್ನು ವಿವರಿಸಲು ಉಪಯೋಗಿಸಲಾಗುತ್ತದೆ.
|
this boy, that chair, those kids, these toys
|
Possessive Adjectives (ಸ್ವಾಮ್ಯಸೂಚಕ ಗುಣವಾಚಕಗಳು)
|
ಸ್ವಾಮ್ಯಸೂಚಕ ಗುಣವಾಚಕಗಳು
ಮಾಲೀಕತ್ವದ ನಾಮಪದವನ್ನು ವಿವರಿಸುತ್ತವೆ. ಈ ಪದಗಳು ಸೇರಿದ ಸಂಬಂಧವನ್ನು ವಿವರಿಸುತ್ತವೆ.
|
This is my dog.
OR
This dog is mine.
|
Quantitative Adjectives (ಪರಿಮಾಣಾತ್ಮಕ ಗುಣವಾಚಕಗಳು)
|
ಇವುಗಳನ್ನು ಸಂಖ್ಯಾ ಗುಣವಾಚಕಗಳು ಎಂದು ಕರೆಯುತ್ತೇವೆ .
|
ten books, two dresses, hundred runs
|
Indefinite Adjectives (ಅನಿರ್ದಿಷ್ಟ ಗುಣವಾಚಕಗಳು)
|
ಅನಿರ್ದಿಷ್ಟ ಗುಣವಾಚಕಗಳು ನಿರ್ದಿಷ್ಟವಲ್ಲದ ನಾಮಪದವನ್ನು ಸೂಚಿಸುತ್ತವೆ.
|
many schools, few people, any pen, some fruits
|
Interrogative Adjectives (ವಿಚಾರಣೆಯ ಗುಣವಾಚಕಗಳು)
|
ವಿಚಾರಣೆಯ ಗುಣವಾಚಕಗಳುನ್ನು ಪ್ರಶ್ನೆ ಕೇಳಲು ಉಪಯೋಗಿಸಲಾಗುತ್ತದೆ.
|
which dress?, whose pen?, what time?
|
Distributive Adjectives
(ವಿತರಣಾ ಗುಣವಾಚಕಗಳು)
|
ಒಂದು ಅಥವಾ ಒಂದಕ್ಕಿಂತ ಹೆಚ್ಚಿನದ್ದರ ಬಗ್ಗೆ ಹೇಳುವುದಿದ್ದರೆ ಈ ಗುಣವಾಚಕಗಳನ್ನು ಉಪಯೋಗಿಸಲಾಗುತ್ತದೆ.
|
each, either, none, any, neither
Neither of the two was selected.
Each girl sang National Anthem.
|