ಅರ್ಥ :

ಇಂಗ್ಲೀಷ್ ವ್ಯಾಕರಣ ಎಂಬುದು, ಓದಲು ಹಾಗೂ ಬರೆಯಲು ಇರುವ ನಿಯಮಗಳು. ಈ ನಿಯಮಗಳು different parts of speech, tenses, etc ಒಳಗೊಂಡಿದೆ. ಈ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಮಾತ್ರ ವಾಕ್ಯವು ಸರಿಯಾಗುತ್ತದೆ. ವ್ಯಾಕರಣವು ಸರಿಯಾದ ವಾಕ್ಯ ರಚಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ವಾಕ್ಯವು ಆಗಿ ಹೋದ ಘಟನೆ ಬಗ್ಗೆ ಹೇಳುತ್ತಿದ್ದರೆ ಅದನ್ನು ಬರೆಯಲು ಇರುವ ನಿಯಮಗಳು ಬೇರೆ ಆಗಿವೆ ಹಾಗೂ ಮುಂದೆ ನಡೆಯುವ ಘಟನೆಗೆ ಬೇರೆ ಆಗಿವೆ.

ಪ್ರಮುಖ ವಿಷಯಗಳು:

ಇಂಗ್ಲೀಷ್ ವ್ಯಾಕರಣ ಕಲಿಯಲು ಕೆಲವೊಂದು  ಪ್ರಮುಖ ವಿಷಯಗಳನ್ನು ತಿಳಿಯಬೇಕು:
ವಿಷಯ
                                       ವಿವರಣೆ
ಉದಾಹರಣೆ 
Nouns
ನಾಮಪದವು ಮೂಲಭೂತವಾಗಿ ವಿಶ್ವದಲ್ಲಿ ವಾಸಿಸುವ ಮತ್ತು ಜೀವಂತವಲ್ಲದ ಎಲ್ಲಾ ವಸ್ತುಗಳ ಹೆಸರು. ಯಾವುದೇ ವ್ಯಕ್ತಿ, ಸ್ಥಳ, ವಿಷಯ, ಪ್ರಾಣಿ, ಇತ್ಯಾದಿಗಳನ್ನು ನಾಮಗಳು ಎಂದು ಪರಿಗಣಿಸಲಾಗುತ್ತದೆ.  ನಾಮಪದಗಳು ಏಕವಚನ ಮತ್ತು ಬಹುವಚನಗಳಾಗಿರಬಹುದು. Ex:- girl, toys, etc. ಲಿಂಗಗಳನ್ನು ಆಧರಿಸಿ ನಾಮಪದಗಳನ್ನು ಪ್ರತ್ಯೇಕಿಸಬಹುದು. ಅವುಗಳು   
masculine, feminine, common, neuter.
book, Annie, computer, cow , Delhi , etc.
Verbs
ಕ್ರಿಯಾಪದ ಕ್ರಿಯೆಯನ್ನು ವಿವರಿಸುತ್ತದೆ ex: sleeping, eating, crying, etc. ನಾವು ಮಾಡುವ ಕ್ರಿಯೆಯನ್ನು ಕ್ರಿಯಾಪದ ಎಂದು ಹೇಳಲಾಗುತ್ತದೆ.  ಕ್ರಿಯೆಯು ದೈಹಿಕವಾಗಿ ಮಾಡುವ ಕ್ರಿಯೆಗಳು, ಮಾನಸಿಕವಾಗಿ ಮಾಡುವ ಕ್ರಿಯೆಗಳು, ಅಸ್ತಿತ್ವದ ಸ್ಥಿತಿಗೆ ಸಂಬಂಧಿಸಿದ ಕ್ರಮಗಳು ಆಗಿರಬಹುದು.
sleep, eat, cry, laugh, move, appear, is, etc.
Adjective
ಗುಣವಾಚಕಗಳು ನಾಮಪದ ಹಾಗೂ ಸರ್ವನಾಮದ ನಿರ್ದಿಷ್ಟ ಮಾಹಿತಿಯನ್ನು ವಿವರಿಸುವ ಪದಗಳಾಗಿದೆ. ಗುಣವಾಚಕಗಳು ಹೆಚ್ಚಿನ ಮಾಹಿತಿಯನ್ನು ನೀಡಿ ನಾಮಪದವನ್ನು ಬದಲಾಯಿಸುತ್ತವೆ.
 ex: I have a black dress. 
black, big, dear, angry, far, etc
Adverbs
ಕ್ರಿಯಾವಿಶೇಷಣಗಳು ವಿವರಿಸುವ ಪದಗಳಾಗಿದ್ದರಿಂದ ಇವುಗಳನ್ನು ವಿಶೇಷಣಗಳು ಎಂದು ಹೇಳಲಾಗುತ್ತದೆ. ಆದರೆ ಇವೆರೆಡರಲ್ಲಿ ವ್ಯತ್ಯಾಸ ಇದೆ. ಏನೆಂದರೆ ವಿಶೇಷಣಗಳನ್ನು ವಾಕ್ಯದಲ್ಲಿ ನಾಮಪದವನ್ನು ಬದಲಿಸಲು ಉಪಯೋಗಿಸಲಾಗುತ್ತದೆ ಹಾಗೂ ಕ್ರಿಯಾವಿಶೇಷಣಗಳು ಕ್ರಿಯಾಪದವನ್ನು , ಮತ್ತು ಕ್ರಿಯಾವಿಶೇಷಣಗಳನ್ನು ಷರತ್ತುಗಳನ್ನು ಬದಲಿಸಲು ಉಪಯೋಗಿಸಲಾಗುತ್ತದೆ. 
 ex: She speaks loudly.            
slowly, angrily, carelessly, fast, etc
Preposition
ಯಾವುದೇ ವಾಕ್ಯದಲ್ಲಿ ನಾಮಪದ ಹಾಗು ಸರ್ವನಾಮ ಕ್ರಿಯೆಗೆ ಸಂಬಂಧಿಸಿದರೆ ಅದನ್ನು Prepositions ಎಂದು ಹೇಳಲಾಗುತ್ತದೆ
 Ex:- Tina went to swim in the pool. ಇಲ್ಲಿ, swimಕ್ರಿಯೆ & poolನಾಮಪದ &  preposition in’.
on, in, under, before, after, etc
Punctuations
ವಾಕ್ಯಗಳನ್ನು ಪರಸ್ಪರ ಪ್ರತ್ಯೇಕಿಸಲುಅದನ್ನು ಅರ್ಥಪೂರ್ಣವನ್ನಾಗಿ ಮಾಡಲು ಕೆಲವೊಂದು ಚಿಹ್ನೆ ಗಳನ್ನು ಬಳಸುತ್ತೇವೆ. ಅವನ್ನು punctuations ಎಂದು ಕರೆಯಲಾಗುತ್ತದೆ. 
Ex:- Where did you go? 
comma (,), full stop (.), question mark (?), exclamatory mark (!) etc.
Modal Verbs
ಕ್ರಿಯಾಪದಗಳು ನಿರ್ದಿಷ್ಟವಾಗಿ ವರ್ತನೆಗಳನ್ನು ವಿವರಿಸುವ ಅಥವಾ ಸೂಚಿಸುವ ವಾಕ್ಯಗಳನ್ನು  ಹೊಂದಿವೆ. ಈ ವರ್ತನೆ ನಿಶ್ಚಿತತೆ, ಇಚ್ಛೆ, ಭದ್ರತೆ, ಅಗತ್ಯತೆ, ಬಾಧ್ಯತೆ, ಸಾಧ್ಯತೆಗಳು ಆಗಿವೆ .
Ex:- Rahul may come tomorrow
might , will, would, could, should, ought, must, may, etc.
Tenses
ಇವುಗಳು ಸಮಯದಲ್ಲಿ ಆದ ಘಟನೆಗಳು. ಮೊದಲೇ ಆಗಿ ಹೋದ, ಈಗ ನಡೆಯುತ್ತಿರುವ, ಮುಂದೆ ನಡೆಯುವ. 3 ರೀತಿಯ ಕಾಲಗಳಿವೆ. 
Ex:- Ali went to school. Here, the sentence shows past tense as went’ is a past tense verb. ಇದು ಭೂತ ಕಾಲ.
Ex:- Ali is going to school. Here, the sentence shows present tense as going’ is a present tense verb. ಇದು ವರ್ತಮಾನ ಕಾಲ,
Ex:- Ali will go to school. Here, the tense shows future tense as will go’ is a future tense verb. ಇದು ಭವಿಷ್ಯತ್ ಕಾಲ.
Past tense, Present tense and Future tense
Active and Passive Voice
ಕ್ರಿಯೆಯನ್ನು ಮಾಡಿದವರಿಂದ ವಾಕ್ಯವು ಪ್ರಾರಂಭವಾದರೆ ಅದು Active voice. Ex:- I washed my clothes.
ಕ್ರಿಯೆಯಿಂದ ಪರಿಣಾಮಕ್ಕೆ ಒಳಗಾದವರಿಂದ ವಾಕ್ಯವು ಪ್ರಾರಂಭವಾದರೆ ಅದು  Passive voice. For eg., The clothes were washed by me. 
Active voice: Hema is writing a story
Passive voice: A story is being written by Hema.
Direct and Indirect Speech
ಒಬ್ಬರು ಹೇಳಿದ ಮಾತನ್ನು ಹಾಗೇ ಬರೆದರೆ ಅದು direct speech. Double inverted commas ( )   ದಲ್ಲಿ ಬರೆಯುತ್ತೇವೆ.
Indirect Speechನಲ್ಲಿ ಒಬ್ಬರು ಹೇಳಿದ ಮಾತು ಹಾಗೇ ಇರುವುದಿಲ್ಲ.  
Direct speech:
Sita said, I am going to school”.
Indirect speech: Sita said that she was going to school.

 ಇಂಗ್ಲೀಷ್ ವ್ಯಾಕರಣ ಕಲಿಯಲು ಸಲಹೆಗಳು : 

  • ರಚನಾತ್ಮಕವಾಗಿ ಕಲಿಯಿರಿ : ಮೂಲಭೂತ ಪರಿಕಲ್ಪನೆಗಳಿಂದ ಕಲಿಯಲು ಶುರು ಮಾಡಿ. ಸರಳ ವಾಕ್ಯವನ್ನು ಹೇಗೆ ರಚಿಸುವುದು ಎಂದು ತಿಳಿದುಕೊಳ್ಳಿ.
  • ದಿನನಿತ್ಯ ಬರೆಯಿರಿ : ಸಾಧ್ಯವಾದಷ್ಟು  ಬರೆದು ಕಲಿಯಿರಿ, ಪ್ರತಿದಿನ ಅಭ್ಯಾಸ ಮಾಡಿ. ಇಂಗ್ಲೀಷ್ ಮಾತನಾಡಲು ಬರುವವರೊಡನೆ ಮಾತನಾಡಿ .
  • ದಿನನಿತ್ಯ ಓದಿರಿ : ಇಂಗ್ಲೀಷ್ ದಿನಪತ್ರಿಕೆಗಳನ್ನು ಓದಿರಿ. ಓದುವಾಗ, ವಾಕ್ಯಗಳ ಕಾಲಗಳನ್ನು ನೋಡಿ. ಅವು ಭೂತಕಾಲದಲ್ಲಿದೆ ಅಥವಾ ವರ್ತಮಾನದಲ್ಲಿ ಇದೆಯೋ ಎಂದು ನೋಡಿ ತಿಳಿದುಕೊಳ್ಳಿ.